ಚಿತ್ರ ಕೃಪೆ: ಸ್ವತಃ |
ಏನು ಬೇಕೋ
ಅದನ ಹುಡುಕಬೇಕಲ್ಲವೇ?
ಏನನ್ನೋ ಬಯಸಿ
ಇನ್ನೇನೋ ಬೇಕೆಂದು
ಮತ್ತೇನನ್ನೋ ಹುಡುಕಿ
ಇನ್ಯಾವುದರ ಹಿಂದೆಯೋ
ಶರವೇಗದಿ ಓಡಿದರೆ ಹೇಗೆ?
ಬೆಳಕು ಬೇಕೆಂದರೆ,
ಬೆಳಕು ಹುಡುಕಬೇಕು.
ಮಿಂಚುಳುವಾಗೋ
ಮೊಂಬತ್ತಿಯಾಗೋ
ಚಂದ್ರನ ಕಾಂತಿಯಾಗೋ
ಸೂರ್ಯತೇಜ ರಶ್ಮಿಯಾಗೋ
ಮಗುವಿನ ಮುಗುಳ್ನಗೆಯಾಗೋ
ಯಾವ ರೂಪದಲ್ಲೋ
ಬೆಳಕು ಬಂದೊದಗಿದಾಗ
ಅಪ್ಪಿ ಒಪ್ಪಬೇಕಲ್ಲವೇ?
ಇಲ್ಲದಿದ್ದಲ್ಲಿ -
ಸಂತಸ ಬಯಸಿ
ಸಂತೃಪ್ತಿ ಬೇಕೆಂದು
ಅರ್ಥ ಹುಡುಕುವ
ಮನ್ನಣೆ ಹಿಂದೋಡುವ
ಇತ್ಯರ್ಥವಾಗದ ಬಾಳ್
ಜಂಜಾಟಕ್ಕೆ ಕೊನೆಯೆಂದು?