೧
ಸಂಜೆಮಲ್ಲಿಗೆ ಅರಳೊ ಹೊತ್ತಲಿ
ಬಾನು ಮೆಲ್ಲಗೆ ಆಡಿದೆ ಹೊನ್ನಿನೋಕುಳಿ!
ಬಾನು ಮೆಲ್ಲಗೆ ಆಡಿದೆ ಹೊನ್ನಿನೋಕುಳಿ!
ಕೊಂಚ ಕೆಂಪು ತೇಲಿ
ಗಗನದ ವರ್ಣಶಾಲೆಯೊಳೂಡಿದೆ ಸಂಚು.
ಅಮ್ಮನ ಬಿಳಿ ನೀಲಿ
ಸೀರೆಗೊಲಿಸಿದಂತಿದೆ ಬಂಗಾರದ ಅಂಚು!
ಗಗನದ ವರ್ಣಶಾಲೆಯೊಳೂಡಿದೆ ಸಂಚು.
ಅಮ್ಮನ ಬಿಳಿ ನೀಲಿ
ಸೀರೆಗೊಲಿಸಿದಂತಿದೆ ಬಂಗಾರದ ಅಂಚು!
೨
ಪಡುವಣದಿ ಹೊನ್ನ ಕಿರಣ
ಮೋಡದಂಚಿಂದಿಣುಕಿ ನಗುವ ತರುಣ!
ಮೋಡದಂಚಿಂದಿಣುಕಿ ನಗುವ ತರುಣ!
ಹಲ್ಕಿರಿದವಂಗೆ ಮನ ಸೋತು
ನಾಚಿ ನೀರಾದವಳಂತೆ ಮುಸ್ಸಂಜೆಯಲಿ ಭೂಬಾಲೆ.
ಕನ್ಯೆಯ ಒಲವ ಪಿಸುಮಾತು
ಕೇಳಿ ಕೆನ್ನೆ ಕೆಂಪೇರಿಸಿದವನಂತೆ ಮುಗಿಲಮಾಲೆ!
ನಾಚಿ ನೀರಾದವಳಂತೆ ಮುಸ್ಸಂಜೆಯಲಿ ಭೂಬಾಲೆ.
ಕನ್ಯೆಯ ಒಲವ ಪಿಸುಮಾತು
ಕೇಳಿ ಕೆನ್ನೆ ಕೆಂಪೇರಿಸಿದವನಂತೆ ಮುಗಿಲಮಾಲೆ!
No comments:
Post a Comment