ಚಿತ್ರ ಕೃಪೆ: www.pbs.org |
"There are only two ways to live your life. One is as though nothing is a miracle. The other is as if everything is." - Albert Einstein
ಬಾಳ್ ಬೆರಗೋ -
ಬ್ರಹ್ಮಾಂಡದಿಂ ಬೆಸಲ್ಗೊಂಡೀ ಬಾಳ್ ಬೆರಗೋ!!
ನಲಿವಲ್ಲಿ ನೊಂದಾಯ್ತು
ನೋವಲ್ಲಿ ನಕ್ಕಾಯ್ತು
ಹಸಿವಲ್ಲಿ ಅತ್ತಾಯ್ತು
ಕಸುವೆಲ್ಲ ಕೊಟ್ಟಾಯ್ತು
ಬರಿದಾಗದೀ ಬೃಹತ್ ಬಾಳ್ ಬೆರಗೋ!!
ದುಃಖ ದುಮ್ಮಾನ ದುಪಟ್ಟಾಯ್ತು
ಸೊಗ ಸಂತಸ ಸಮ್ಮೋಹಿಸಾಯ್ತು
ರಾಗ ರೋಷ ರೋಸೋಯ್ತು
ಮಾನ ಮನ್ನಣೆ ಮೀರಾಯ್ತು
ಬಂದೊದಗದೀ ಬೆಳರ್ ಬಾಳ್ ಬೆರಗೋ!!
ಕಣ ಕಾಣೋ ಕಣ್ಣೆರಡೂ ಕುರುಡಾಯ್ತು
ಮನ ಮಿಡಿಸೋ ಮಾತೆಲ್ಲಾ ಮರೆತೋಯ್ತು
ರೋಮಾಂಚನ ರಸಧಾರೆ ರಮಿಸಾಯ್ತು
ತನು ತೊರೆದ ತಾನ್ ತಲ್ಲೀನ ತವರಾಯ್ತು
ಬಿಡಿಸಲಸದಳ ಬಂಧವೀ ಬಾಳ್ ಬರಿ ಬೆರಗೋ!!
ಬಾಳ್ ಬೆರಗೋ -
ಬ್ರಹ್ಮಾಂಡದಿಂ ಬೆಸಲ್ಗೊಂಡೀ ಬಾಳ್ ಬೆರಗೋ!!
No comments:
Post a Comment