Oct 31, 2011

ಸಾವಿನ ಚೆಲುವೆ !!



ಸಾವಿನ ಮೋಹಕ ಚೆಲುವೆ ಎಂದೇ ಬಣ್ಣಿಸಲಾಗುತಿಹಳವಳು !
ಜೀವನದೆಲ್ಲಾ ತಳಮಳ - ತೊಳಲಾಟಗಳಿಂದ ಮುಕ್ತಿವೀಯ್ವಳಂತವಳು !
ಅವಳೇ ಇರಬಹುದೆ ಬದುಕ ಕೊರತೆ 
ನೀಗಿಸಿ ನಲಿಸುವ ದೇವತೆ ?

ಆದರೆ, ಈ ವರ್ಣನೆಗಳು -
ಅವರಿವರ ಅಭಿಪ್ರಾಯ, ಭಾವನೆಗಳು.
ಅನುಭವಿಸದೆ ಅವಳೊಡನೆ ಆಪ್ಯಾಯತೆ -
ಅರಿಯಲಿ ಹೇಗೆ ನಾ ಅ ಘನತೆಯ ನೈಜತೆ?

ತಿಳಿಯೆ ನಾ ಅವಳನ್ನು,
ಆದ್ದರಿಂದಲೇ ಅವಳ ಬಗೆಗೆ ಈ ಕುತೂಹಲ - ಜಿಜ್ಞಾಸೆಗಳು.
ಅರಿತರೊಮ್ಮೆ ಅವಳ ಅಂತರಾಳವನ್ನು -
ಬತ್ತಿ ಹೋಗವೆ ಈ ಚಿಮ್ಮುವ ಉತ್ಸಾಹದ ಸೆಲೆಗಳು?

ಇಂತೆಯೇ ಇರಲಿ ನನ್ನೊಳು ಈ ಉತ್ಸಾಹ,
ಅರಳುತಿರಲಿ ಅದರ ಬೆನ್ನತ್ತಿ ಬರುವ ಉನ್ಮಾದ!
ಕಂಡು, ತಿಳಿದು, ಅನುಭವಿಸಿ ಮರೆವ ಯಾಂತ್ರಿಕತೆಗಿದೋ ನನ್ನ ನಕಾರ,
ನಿರೀಕ್ಷೆಯ ಗಳಿಗೆಗಳು, ಕನಸ್ಸಿನ ಮಳಿಗೆಗಳು - ಇವೇ ನನಗೆ ಸಾಕ್ಷಾತ್ಕಾರ!

ಅವಳ ಮೋಹಕತೆಯ ಕಪೋಕಲ್ಪಿತ ಕಥೆಗಳು,
ಮರಣದಾಚೆಗೆ ಬದುಕುಳಿದವರ ಹೇಳತೀರದ ವ್ಯಥೆಗಳು.
ಮುಗ್ಧತೆಯ ತಬ್ಬಿ, ತನ್ನ ತಾ ಸಂತೈಸಿದೆ ಮನವು,
ಏಳು-ಬೀಳಿನ ಜೀವ ಜ್ವಾಲೆಯಲಿ ಬೇಯಲೊಪ್ಪಿದೆ ತನುವು! 

No comments:

Post a Comment