Mar 4, 2012

ನಮ್ಮಯ ಬಾಳಿನ ಕತೆಗಳು.

ಜನನದಿ ಖಾಲಿ ಹಾಳೆಯು,
ಮರಣದಿ ತುಂಬುವವು ಪುಟಗಳು.
ಬರೆವೆವು ಬದುಕಿಹ
ಕ್ಷಣಗಳಲಿ
ನಮ್ಮಯ ಬಾಳಿನ
ಕತೆಗಳನು.

ಅಳತೆಗೆ ಸಿಲುಕದ ಅಲೆಗಳಿವು,
ಕ್ಷಣ ಉರುಳುವಲಿ ಏರಿಳಿವುವವು.
ಏರುತ ಇಳಿಯುತ
ಆಡುವಲಿ
ಕಲಿವೆವು ಬದುಕುವ
ಸೂತ್ರವನು.

ಅಲ್ಲಗಳೆದು ಆಡುವ ಆಟವನು
ಕಟ್ಟಿಕೊಂಡೆವು ಸ್ಪರ್ಧೆಯ ಮಾಟವನು.
ಎಡವದೇ ಏರುತಲಿರಬೇಕೆಂಬ
ಅನಿವಾರ್ಯದಲಿ
ಅಗ್ನಿಗಾಹುತಿ ಕೊಡಲೊರಟೆವು
ಸರ್ವಸಮ್ಮತಿಯನು.

ಏರುವ ಭರದಿ ನಾವುಗಳು
ತುಳಿವೆವು ಹಲವರ ಶಿರಗಳನು.
ಒಂದೇ ದಿಕ್ಕಿಗೋಡುವ
ನೀತಿಯಲಿ
ತೊರೆದೆವು ಸರ್ವತೋಮುಖ
ರೀತಿಯನು.

ಸೂತ್ರದಿ ಬೆಸೆದ ಕತೆಗಳಿವು
ಗಮನಿಸೆ ಕಾಣ್ವುದತಿ ಸೂಕ್ಷ್ಮವು.
ಕಂಡಂತಿದ್ದರು ಸಾಮ್ಯವು
ಮೇಲ್ನೋಟದಲಿ
ಕಾಣ್ವೆವು ಒಳಗಿಣುಕೆ
ಭಿನ್ನವನು.

ನಮ್ಮೀ ಕತೆಯನೋದುವ ಪೀಳಿಗೆಯು
ನಿರುತ್ತರರಾಗಿಯೇ ನಿಂತಿರುವ ನಾವುಗಳು.
ಎಲ್ಲರೂ ಸವೆವರು
ಕಾಲದಲಿ
ಮೃತ್ಯುಂಜಯನೇನ್
ಮಾನವನು?

No comments:

Post a Comment