Jan 15, 2013

ಸ್ನೇಹಕ್ಕೆ ಪ್ರೇಮವೇ ಅಪಚಾರ!?


ಮೋಡದಂಚಿನಿಂದ ಮೂಡಿ ಬರುವ ಚಂದಿರ
ತರುವ ಆ ನಿನ್ನ ಜೊತೆಗಿನ ನೆನಪು, ಅದೆಷ್ಟು ಸುಂದರ.
ನಿನ್ನ ನುಡಿಯ ನೆನೆದರೆ ಇಂದಿಗೂ ಕೋಗಿಲೆಯ ಇಂಚರ.
ಗೆಳತಿ, ಏಕೆ ನೀನಿಲ್ಲದೀ ಬಾಳು ಇಷ್ಟು ಬೇಸರ?

ನಮ್ಮ ನಡುವಿನ ಸ್ನೇಹವಾಗಿತ್ತದೆಷ್ಟು ಶಾಂತ-ಸುಮಧುರ,
ಮೋಹ ಕಾಮದ ಛಾಯೆಯಲಿ ನಲುಗಿ ಹೋಯಿತದು ತತ್ತರ.
ಸುಲಲಿತ ಸುಮನೋಹರ ಸ್ನೇಹಕ್ಕೆ ಪ್ರೇಮವೇ ಅಪಚಾರ!?
ಗೆಳತಿ, ಏಕೆ ತಂದೆವು ನಮ್ಮ ನಡುವೆ ಪ್ರೀತಿಯ ವಿಚಾರ?

ಹೂವೊಳಗಿನ ಹಣ್ಣಿನಂತೆ ಇಹದೆ ಸ್ನೇಹದೊಳು ಪ್ರೇಮದ ಆಗರ?
ಸದಾಶಯ ಸದ್ಭಾವನೆಗಳ ಸ್ನೇಹ - ಪರಿಶುದ್ಧ ಪ್ರೀತಿಯ ಅವತಾರ,
ಆದರೂ ಸ್ನೇಹ-ಪ್ರೇಮದ ದ್ವಂದ್ವ ವಿಷಮ ವ್ಯೋಮದ ಶ್ರೀಕಾರ.
ಗೆಳತಿ, ಏಕೆ ಸಿಲುಕಿದೆವು ವ್ಯೋಮದೊಳು? ತಿಳಿಯದು ಪರಿಹಾರ!

No comments:

Post a Comment