Feb 17, 2013

ನಾ ನಿನ್ನ ಬಾಳಲಿ ಬೆರೆವೆ!

ಚಿತ್ರ ಕೃಪೆ: shannonmilholland.blogspot.com

"If you press me to say why I loved him, I can say no more than because he was he, and I was I." - Michel de Montaigne

ನೀನ್ ಹೇಗಿರುವೆಯೋ ಗೆಳೆಯ, ಅದ ನಾನರಿಯೆ.
ಹೀಗಿದ್ದರೆ ಹೇಗೆ ಎಂದೊಂದಿದೆ ನನ್ನೊಳು ಬಯಕೆ.
ತೀರುವುದೇನೋ ತಿಳಿಯನು ಆ ಒಲವಿನ ಹರಕೆ,
ನನಸಾಗುವುದಾದರೆ ಕನಸು ನಾ ಆನಂದದ ಅಕ್ಷತೆ!

ಕೈಸೇರಿಯೂ ಕೈತಪ್ಪುವ ಆ ಒಲವಿನ ಓಲೆ,
ತಿಳಿದೇಳಿವುದೇನೋ ಈ ಪ್ರೇಮದ ಮಾಯೆ.
ಇದ್ದೂ ಇಲ್ಲದೆ ಇರುವುದೆ ಪ್ರೀತಿಯ ಪರಿಭಾಷೆ,
ಅರಿತು ಅದರಲ್ಲೇ ನಲಿವುದೆ ಬಾಳಿನ ಒತ್ತಾಸೆ!

ನಿನ್ನೊಳು ನಾನಿದ್ದರೂ ನಾ ನಾನಾಗಿಯೇ ಇರುವೆ,
ಇರುವಂತೆಯೇ ಒಪ್ಪಿದರೆ ನನಗೂ ಸರಿಯೇ.
ಒಮ್ಮತದಿ ಮೂಡಿದಾಗ ಪ್ರೇಮದ ಪರಿವೆ,
ಸರಿತಪ್ಪರಿತು ಲೋಪ ದೋಷ ತಿದ್ದಿ ನಡೆವೆ.

ಹೀಗಿದ್ದರೆ ಗೆಳೆಯ ನಾ ನಿನ್ನ ಬಾಳಲಿ ಬೆರೆವೆ!
ನೀನಿಲ್ಲದೆ ಈಗ, ರಾಗದಿ ಆಲಾಪದ ಕೊರತೆ;
ನಿನ್ನೊಂದಿಗೆ ಆಗ, ಋತುಗಾನದ ಸಲುಗೆ;
ಹೀಗೆ ಕನಸಲಿ ತೊಯ್ದಳು ಚೈತ್ರದ ಚೆಲುವೆ!

No comments:

Post a Comment