Apr 10, 2014

ಹೃದಯದ ವಿಕ್ರಯ!



ಮೊದಲಲಿ ಪರಿಚಯ,
ಸಹಚರ, ಸಂಗಡ -
ಸ್ನೇಹದ ಅಂಕುರ!

ಅಭಿರುಚಿ ಸಂಚಯ,
ಭಾವ ಸಮನ್ವಯ,
ಅಭಿಮಾನದ ಉದಯ!

ಸಾತತ್ಯ ಸಮಯ;
ಆದರೂ ಗೆಳೆಯ
ಅರಿಯನು ಎಂದಾಗಿತ್ತೋ
ಹೃದಯದ ವಿಕ್ರಯ!!

1 comment:

  1. ಈ ಸಾಲುಗಳು ವಿಸ್ಮಯ, ಕಾವ್ಯ ರಸ ಸಂಚಯ!

    ReplyDelete