Sep 10, 2016

ಮೊನಚುಮಾರಿ!

 

ಕಣೆ, ಕತ್ತಿ, ಕಠಾರಿ, ಚೂರಿ 
ಹೃದಯ ಇರಿವಲ್ಲಿ 
ನಾ ಮುಂದು, 
ತಾ ಮುಂದೆಂದು 
ನಡೆಸುತ್ತಿದ್ದವು ಮಾರಾಮಾರಿ! 

ಕಂಡು ಈ ಬಡಾಯಿ ಬಾರಿ ಬಾರಿ 
ಹಿಂಬದಿಯಲ್ಲಿ 
ನಿಂತು ತನ್ನೊಳಗೇ 
ಮುಗುಳ್ನಗುತಿತ್ತು 
ಮಾತೆಂಬ ಮೊನಚುಮಾರಿ!

No comments:

Post a Comment