ಓ ಕಾಲನೇ,
ನಿನ್ನಡಿಗಳೊಳ್
ಧೂಳಾಗಿಯೇ
ನಾ ಬಾಳುವೆ.
ನಿನ್ ಗರ್ಭದೊಳ್
ಯಾವ ವರ್ತಮಾನವು
ಯಾವ ಭವಿಷ್ಯವ
ಸೃಜಿಸುವುದೋ
ಎನಗೆ ತಿಳಿವುದೇ?
ಎನ್ ದೃಷ್ಟಿಯೊಳ್
ನೀ ಕೃಪೆ ತೋರಿದೆಡೆ,
ತೋರದಿದ್ದೊಡೆ
ಹಸಾದವೆಂದೊಪ್ಪಿಯೇ
ಬಾಳ್ ಸವೆಸುವೆ.
ಬೆದರಿಸಿ, ಭವಣೆಗಳ
ನೀ ಭೋರ್ಗರೆಯೇ
ಸಹಿಸಿ ಹೋರಾಡದೆ,
ಎನಗೆ ಬೇರೆ
ವಿಧಿ ಏನಿದೆ?
ಮುಂದೆ ಮಣ್ಣಾಗುವೆನೋ
ಮಲ್ಲಿಗೆಯ ತವರಾಗುವೆನೋ
ಶಿಖರ ಶ್ರೇಣಿಯೋ ಕಾಣೆ.
ಧೂಳ್, ಧೂಳಾಗಿಯೇ
ನಿನ್ನಲ್ಲಿ ಶರಣಾಗುವೆ.
ನಿನ್ನಡಿಗಳೊಳ್
ಧೂಳಾಗಿಯೇ
ನಾ ಬಾಳುವೆ.
ನಿನ್ ಗರ್ಭದೊಳ್
ಯಾವ ವರ್ತಮಾನವು
ಯಾವ ಭವಿಷ್ಯವ
ಸೃಜಿಸುವುದೋ
ಎನಗೆ ತಿಳಿವುದೇ?
ಎನ್ ದೃಷ್ಟಿಯೊಳ್
ನೀ ಕೃಪೆ ತೋರಿದೆಡೆ,
ತೋರದಿದ್ದೊಡೆ
ಹಸಾದವೆಂದೊಪ್ಪಿಯೇ
ಬಾಳ್ ಸವೆಸುವೆ.
ಬೆದರಿಸಿ, ಭವಣೆಗಳ
ನೀ ಭೋರ್ಗರೆಯೇ
ಸಹಿಸಿ ಹೋರಾಡದೆ,
ಎನಗೆ ಬೇರೆ
ವಿಧಿ ಏನಿದೆ?
ಮುಂದೆ ಮಣ್ಣಾಗುವೆನೋ
ಮಲ್ಲಿಗೆಯ ತವರಾಗುವೆನೋ
ಶಿಖರ ಶ್ರೇಣಿಯೋ ಕಾಣೆ.
ಧೂಳ್, ಧೂಳಾಗಿಯೇ
ನಿನ್ನಲ್ಲಿ ಶರಣಾಗುವೆ.