Someday I’ll be a weather-beaten skull resting on a grass pillow,
Serenaded by a stray bird or two.
Kings and commoners end up the same,
No more enduring than last night’s dream.
— Ryokan
ಎಂದೋ ಒಂದು ದಿನ ನಾನು ಸಹ
ಕಲ್ಲು ಹುಲ್ಲು ಕಸ ಮುಳ್ಳು ಕಳೆಯಂತೆ
ಬಿಸಿಲಲಿ ಬೆಂದು ಗಾಳಿಯಲಿ ತೊಯ್ದು
ಮಳೆಯಲಿ ಮಿಂದ ಬರಿ ಬುರುಡೆಯಷ್ಟೇ!
ಹಕ್ಕಿ ಹುಳು ಕ್ರಿಮಿ ಕೀಟ ಜಂತುಗಳೆಲ್ಲವೂ
ಅಡ್ಡಾಡುವ ಸೂಕ್ಷ್ಮಮಾಣುಗಳ ಸಂತೆ.
ಬದುಕು ಎಷ್ಟೇ ವಿಶಾಲವೂ ವೈವಿಧ್ಯವೂ
ಯಶಸ್ವಿಯೂ ಮನ್ನಣೆಭರಿತವೂ ಆದರೂ
ನಮಗೆ ಕಟ್ಟಿಟ್ಟ ನಸೀಬು ಕೊಳೆವುದಷ್ಟೇ!
ಕೊಳೆವ ಮುನ್ನ ಜಗವ ಮೆಚ್ಚಿಸುವ
ದೊರೆಯಾಗಿ ಆಳುವ ಆಸೆಗಳ ಕಂತೆ.
ದೊರೆಯಾದರೂ, ಅಂಗಲಾಚಿದರೂ
ಕಲಿಯಾದರೂ, ಕವಿಯಾದರೂ
ಬುರುಡೆಯ ಅನಿವಾರ್ಯ ಕೊಳೆವುದಷ್ಟೇ!