ಚಿತ್ರ ಕೃಪೆ: ಸ್ವತಃ |
(ಕೃತಜ್ಞತೆ: ಸಂದರ್ಶನ ಒಂದರಲ್ಲಿ "ಓ ಬದುಕೇ ನೀ ಮೌನವಾಗಿಯೇ ಉಳಿದು ಬಿಟ್ಟೆ!" ಎಂಬ ಸಾಲು ಕೇಳಿ ಆ ಸಾಲನ್ನು ಸ್ಫೂರ್ತಿಯಾಗಿ ಬಳಸಿ ಕವಿತೆ ಬರೆಯಲು ಸಲಹೆ ನೀಡಿದ ಗೆಳೆಯನಿಗೆ)
ಓ ಬದುಕೇ,
ನೀನು ನಿಜವಾಗಿಯೂ
ಮೌನವಾಗಿಯೇ ಉಳಿದೆಯಾ?
ಅಥವಾ
ನಿನ್ನ ಸಹಜ ಉದಾಸೀನಕ್ಕೆ
ನಾವು ಮೌನದ ಭಾಷ್ಯ ಬರೆದೆವಾ?
ಓ ಬದುಕೇ,
ನಮ್ಮ ಕಥೆ-ಕಲ್ಪನೆಗಳಿಗೆ
ನಿನ್ನ ಉಪಮೇಯವಾಗಿಸಿ ಬಿಟ್ಟೆವಾ?
ಅಥವಾ
ನಿನ್ನ ಚದುರಂಗದಾಟದಲ್ಲಿ
ನಾವು ಅರಿವಿಲ್ಲದೆ ಪಗಡೆಗಳಾದೆವಾ?
ಓ ಬದುಕೇ,
ನಮಗೆ ಅನುವಾದಾಗ
ನಾವೇ ಆಯ್ಕೆಗಳನ್ನು ಆರಿಸಿಕೊಂಡೆವಾ?
ಅಥವಾ
ನಿನ್ನ ದೂಡಿ ತನ್ಮೂಲಕ
ನಮ್ಮ ಆಯ್ಕೆಗಳ ಸಮರ್ಥಿಸಿಕೊಂಡೆವಾ?
ಓ ಬದುಕೇ,
ನೀನು ಬವಣೆಗಳ
ಬೇಗೆಯಲಿ ಬೇಯುವ ಅನಿವಾರ್ಯವಾ?
ಅಥವಾ
ಸುಖ ದುಃಖೇತರ
ಭಾವ ವೈವಿಧ್ಯಕ್ಕೆ ನಾವು ಕುರುಡಾದೆವಾ?
(Oh life,
Is it that you have
truly remained silent?
Or
Have we interpreted your
natural indifference as silence?
Oh life,
Is it that we have made you
the metaphor for all our fictions?
Or
Have we unknowingly
remained pawns in your game?
Oh life,
Is it that we made our
choices when it suited us best?
Or
Have we blamed you and
consequently justified our choices?
Oh life,
Is it that you are the
inevitability of bearing pain?
Or
Have we been blinded to the
diverse set of varied feelings?)
No comments:
Post a Comment